/newsfirstlive-kannada/media/post_attachments/wp-content/uploads/2023/06/DRAVID_ROHIT-1.jpg)
ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಗೆದ್ದಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಇದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೂ ಕೊನೆ ಟಿ20 ವಿಶ್ವಕಪ್ ಆಗಿದೆ.
ಇನ್ನು, ಈಗಾಗಲೇ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಅವರ ಟೀಮ್ ಇಂಡಿಯಾ ಮುಖ್ಯ ಕೋಚ್ ಅಧಿಕಾರದ ಅವಧಿ ಮುಕ್ತಾಯವಾಗಿದೆ. ಹಾಗಾಗಿ ರಾಹುಲ್ ದ್ರಾವಿಡ್ ಜತೆಗಿನ ಜರ್ನಿ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಭಾವುಕರಾಗಿ ಇನ್ಸ್ಟಾಗ್ರಾಮ್ ಪೋಸ್ಟ್ವೊಂದು ಹಾಕಿದ್ರು.
An emotional Instagram post by Captain Rohit Sharma for Rahul Dravid. ❤️ pic.twitter.com/oRJsk489z1
— Johns. (@CricCrazyJohns)
An emotional Instagram post by Captain Rohit Sharma for Rahul Dravid. ❤️ pic.twitter.com/oRJsk489z1
— Johns. (@CricCrazyJohns) July 9, 2024
">July 9, 2024
ಡಿಯರ್ ರಾಹುಲ್ ಭಾಯ್, ನಾನು ನನ್ನ ಫೀಲಿಂಗ್ ಹಂಚಿಕೊಳ್ಳಲು ಸರಿಯಾದ ಪದಗಳಿಗಾಗಿ ಹುಡುಕಾಟ ನಡೆಸುತ್ತಿದೆ. ನನಗೆ ಈಗಲೂ ಸರಿಯಾದ ಪದಗಳನ್ನು ನನ್ನ ಫೀಲಿಂಗ್ಸ್ ಹಂಚಿಕೊಳ್ಳುತ್ತಿದ್ದೇನೆ ಅನ್ನೋ ಖಾತ್ರಿ ಇಲ್ಲ. ನಾನು ಎಲ್ಲರಂತೆ ನಿಮ್ಮ ಕ್ರಿಕೆಟ್ ನೋಡುತ್ತಲೇ ಬೆಳೆದಿದ್ದೇನೆ. ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನೀವು ದೊಡ್ಡ ಸ್ಟಾಲ್ವಾರ್ಟ್, ಅಪಾರ ಸಾಧನೆ ಮಾಡಿದ್ದೀರಿ. ಎಲ್ಲವನ್ನೂ ಪಕ್ಕಕ್ಕಿಟ್ಟು ನಮ್ಮೊಂದಿಗೆ ಕೋಚ್ ಆಗಿ ಕೆಲಸ ಮಾಡಲು ಬಂದ್ರಿ. ಅದು ನಮಗೆ ದೊಡ್ಡ ಗಿಫ್ಟ್. ನಮಗೆ ಎಲ್ಲ ರೀತಿಯಲ್ಲೂ ಆರಾಮಾಗಿ ನೆರವು ನೀಡಿದ್ರಿ. ಕ್ರಿಕೆಟ್ ಬಗ್ಗೆ ನಿಮ್ಮ ಪ್ರೀತಿ ಮತ್ತು ಗೌರವದ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ನಿಮ್ಮಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ನನ್ನ ವರ್ಕ್ ವೈಫ್ ಎಂದು ನನ್ನ ಹೆಂಡತಿ ಕಾಲೆಳೆಯುತ್ತಾರೆ. ನಾನು ಒಟ್ಟಿಗೆ ವಿಶ್ವಕಪ್ ಗೆದ್ದಿದ್ದು ನನ್ನ ಅದೃಷ್ಟ. ನೀವು ನನ್ನ ಕೋಚ್, ಸ್ನೇಹಿತರು ಮತ್ತು ಗುರುಗಳು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ರೋಹಿತ್ ಭಾವುಕ ಪೋಸ್ಟ್ ಹಾಕಿ ಕಣ್ಣೀರಿಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ